ನಮ್ಮ ಸಂವಿಧಾನದ ಪ್ರಕಾರ ಭಾರತದಲ್ಲಿ ಯಾವುದೇ ರಾಜ್ಯ-ಧರ್ಮಕ್ಕೆ ಅವಕಾಶವಿಲ್ಲ. ರಾಜ್ಯವು ಎಲ್ಲಾ ಧರ್ಮಗಳನ್ನು ಒಂದೇ ರೀತಿಯಲ್ಲಿ ನೋಡ ತಕ್ಕದ್ದು. ಸಂವಿಧಾನ ಸಭೆಯ ವ್ಯಾಖ್ಯಗೋಷ್ಠಿಯ ಪ್ರತಿಗಳನ್ನು ಪರಿಶೀಲಿಸಿದರೆ ಸ್ಪಷ್ಟವಾಗುವ ವಿಚಾರವೇನೆಂದರೆ ದೇಶದ ವಿಭಜನೆಯ ಸಂದರ್ಭದಲ್ಲಿ ನಿರ್ಮಾಣವಾದ ವಿಶೇಷ ಪರಿಸ್ಥಿತಿಯಿಂದಾಗಿ ಬಹು ಸಂಖ್ಯಾತರಿಗೆ ಯಾವ ಹಕ್ಕುಗಳು ನೈಸರ್ಗಿಕವಾಗಿ ಲಭ್ಯ ಎಂದು ನಂಬಲಾಯಿತೋ ಆ ಹಕ್ಕುಗಳನ್ನು ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷವಾಗಿ ವ್ಯಕ್ತಪಡಿಸಲಾಯಿತು. ಆದರೆ ಈ ಲಿಖಿತ ಹಕ್ಕುಗಳನ್ನು ಬಹು ಸಂಖ್ಯಾತರಿಗೆ ಇಲ್ಲದ ಹಾಗೆ ಮಾಡುವ ಯಾವುದೇ ಉದ್ದೇಶ ನಮ್ಮ ಸಂವಿಧಾನ ಕರ್ತೃಗಳಿಗೆ ಇರಲಿಲ್ಲ. ಹೀಗಿದ್ದರೂ ಸಮಯದ ಪಯಣ ಸಾಗುತ್ತಿದ್ದಂತೆ ಆರ್ಟಿಕಲ್ 26 ರಿಂದ 30 ರವರಗೆ ಇರುವ ಹಕ್ಕುಗಳು ಕೇವಲ ಅಲ್ಪಸಂಖ್ಯಾತರಿಗೆ ಸೀಮಿತವಾಗಿ ಬಹುಸಂಖ್ಯಾತರಾದ ಹಿಂದೂಗಳಿಗೆ ಇಲ್ಲದಂತೆ ಆಯಿತು. ಬಹು ಸಂಖ್ಯಾತರ ವಿರುದ್ಧದ ಅನಾರೋಗ್ಯಕರ ಭೇದಭಾವ ವಾತಾವರಣಕ್ಕೆ ಇದು ಎಡೆ ಮಾಡಿಕೊಟ್ಟಿತು. ಸಮಾಜದ ಯಾವುದೇ ಪಂಗಡಕ್ಕೆ ನಮ್ಮ ವಿರುದ್ಧ ಅನ್ಯಾಯವಾಗಿದೆ ಎಂಬ ಆಲೋಚನೆ ಬಂದರೆ ದೇಶದ ಏಕತೆಗೆ ಧಕ್ಕೆ ತಗಲುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಈ ರೀತಿಯಾದ ಸಾಂವಿಧಾನಿಕ ಹಿಂದೂ ವಿರೋಧಿ ಕಾನೂನುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ದಿವಂಗತ ಸ್ಯೆದ್ ಶಹಬುದ್ಧಿನ್ ರವರು 1995ರಲ್ಲೇ ಲೋಕ ಸಭೆಯಲ್ಲಿ ಪ್ರೈವೇಟ್ ಮೆಂಬರ್ ಬಿಲ್ ನಂಬ್ರ ೩೬/೧೯೯೫ರ ಮೂಲಕ ಸಂವಿಧಾನ ತಿದ್ದುಪಡಿ ಬಿಲ್ ಒಂದನ್ನು ತಂದಿದ್ದರು. ಅದರ ಮೂಲಕ ಆರ್ಟಿಕಲ್ 30 ಇದನ್ನು ತಿದ್ದುಪಡಿ ಗೊಳಿಸಿ ಕೇವಲ ಅಲ್ಪ ಸಂಖ್ಯಾತರಿಗೆ ನೀಡಿರುವ ಶೈಕ್ಷಣಿಕ ಸಂಸ್ಥೆ ನಡೆಸುವ ಹಕ್ಕನ್ನು ದೇಶದ ಎಲ್ಲಾ ಪ್ರಜೆಗಳಿಗೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದರು.

ಎಲ್ಲಾ ಧರ್ಮದ ಪ್ರಜೆಗಳಿಗೆ ಸಮಾನ ಹಕ್ಕುಗಳನ್ನು ನೀಡಿ ತಾರಾತಮ್ಯಭರಿತ ಪ್ರಶಾಸನವನ್ನು ಕೊನೆಗೊಳಿಸಿ ಕಾನೂನು ರೀತ್ಯ ಸಮಾನತೆಯನ್ನು ಸ್ಥಾಪಿಸುವ ಕಾರಣ ಈಗ ಹಿಂದೆಂದಿಗಿಂತ ಹೆಚ್ಚಾಗಿದೆ. ಇದಕ್ಕೋಸ್ಕರ ಆರ್ಟಿಕಲ್ 26 ರಿಂದ 30 ಇವನ್ನು ಕೂಡಲೇ ತಿದ್ದುಪಡಿ ಗೊಳಿಸಬೇಕು. ಇದರಿಂದ ಈ ಕೆಳಗಿನ ವಿಷಯಗಳಲ್ಲಿ ಹಿಂದೂಗಳಿಗೂ ಅಲ್ಪ ಸಂಖ್ಯಾತರಷ್ಟೇ ಸಮಾನ ಹಕ್ಕು ದೊರೆಯುತ್ತದೆ:

೧) ದೇವಸ್ಥಾನ, ಮಠ ಮಂದಿರಗಳನ್ನು ಸರಕಾರೀ ಹಸ್ತಕ್ಷೇಪ ರಹಿತ ನಿರ್ವಹಣೆ ಮಾಡುವ ಅಧಿಕಾರ

೨) ವಿದ್ಯಾರ್ಥಿವೇತನ, ಯೋಜನೆಗಳು ಮುಂತಾದ ವಿವಿಧ ಸರಕಾರೀ ಸೌಲಭ್ಯಗಳಿಗೆ ಸಮಾನ ಅರ್ಹತೆಯ ಪ್ರಾಪ್ತಿ

೩) ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ಪುರಾತನ ಜ್ಞಾನ ಮತ್ತು ಪುರಾತನ ಧಾರ್ಮಿಕ ಗ್ರಂಥಗಳ ಪಾಠ ಮಾಡುವ ಅವಕಾಶ

೪) ಸರ್ಕಾರದ, ಅಥವಾ ಸರಕಾರೀ ಸಂಘದ, ಹಸ್ತಕ್ಷೇಪವಿಲ್ಲದೇ ಎಲ್ಲಾ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಣೆ ಮಾಡುವ ಸಂಪೂರ್ಣ ಅಧಿಕಾರ

ಇದಕ್ಕೆ ಸಂಬಂಧ ಪಟ್ಟಂತೆ ಡಾಕ್ಟರ ಸತ್ಯಪಾಲ್ ಸಿಂಗ್ ರವರು, ತಾವು ಕೇಂದ್ರ ಮಂತ್ರಿಯಾಗುವುದಕ್ಕೆ ಮುನ್ನ, ಲೋಕ ಸಭೆಯಲ್ಲಿ No.೨೨೬/೨೦೧೬ ಅಡಿಯಲ್ಲಿ ಪ್ರೈವೇಟ್ ಮೆಂಬರ್ ಬಿಲ್ ಒಂದನ್ನು ಪ್ರಸ್ತಾಪಿಸಿದ್ದರು. ಈ ಬಿಲ್ ನಲ್ಲಿ ಸಂವಿಧಾನದ ಆರ್ಟಿಕಲ್ ೨೬ರಿಂದ  ೩೦ ಈ ಹಕ್ಕುಗಳು ಪರಿಷ್ಕರಣೆಯ ಸಲುವಾಗಿ ತಿದ್ದುಪಡಿಗಳನ್ನು ಮಂಡಿಸಲಾಗಿತ್ತು. ಈ ತಿದ್ದುಪಡಿ ಮಸೂದೆಯಲ್ಲಿ ಅಲ್ಪ ಸಂಖ್ಯಾತರ ಯಾವುದೇ ಹಕ್ಕುಗಳನ್ನು ವಾಪಸ್ ಪಡೆಯುವ ಉದ್ದೇಶವಿರುವುದಿಲ್ಲ. ಆದರೆ ಅಲ್ಪ ಸಂಖ್ಯಾತರಂತೆ ಬಹು ಸಂಖ್ಯಾತರಿಗೂ ಸಮಾನ ರೀತಿಯ ಹಕ್ಕುಗಳನ್ನು ನೀಡುವ ಮಾರ್ಗ ತೋರಿಸಿಕೊಡಲಾಗಿದೆ. ಇದರಿಂದ ಎಲ್ಲಾ ಪ್ರಜೆಗಳನ್ನು ಒಂದೇ ದೃಷ್ಟಿಯಿಂದ ನೋಡುವ ನಮ್ಮ ಸಂವಿಧಾನದ ಧ್ಯೇಯಕ್ಕೆ ಪುಷ್ಟಿ ಸಿಗುತ್ತದೆ.

(i) ಡಾಕ್ಟರ ಸತ್ಯಪಾಲ್ ಸಿಂಗ್ ರವರ ಲೋಕ ಸಭೆ ಪ್ರೈವೇಟ್ ಮೆಂಬರ್ ಬಿಲ್ ನಂಬ್ರ ೨೨೬/೨೦೧೬ ಮತ್ತು (ii) ಸ್ಯೆದ್ ಶಹಬುದ್ಧಿನ್ ರವರ ಲೋಕ ಸಭೆ ಪ್ರೈವೇಟ್ ಮೆಂಬರ್ ಬಿಲ್ ನಂಬ್ರ ೩೬/೧೯೯೫ ಇವುಗಳ ಪ್ರತಿಗಳನ್ನು ನಿಮ್ಮ ಪರಿಶೀಲನೆ ಮತ್ತು ಶೀಘ್ರ ಸ್ಪಂದನೆಯ ಆಶೆಯಿಂದ ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.

ಇದರಂತೆ ಈ ಮುಂಬರುವ ಲೋಕ ಸಭಾ ಅಧಿವೇಶನದಲ್ಲೇ ಡಾಕ್ಟರ ಸತ್ಯಪಾಲ್ ಸಿಂಗ್ ರವರ ಪ್ರೈವೇಟ್ ಮೆಂಬರ್ ಬಿಲ್ಲನ್ನು ಪಾಸ್ ಮಾಡಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇವೆ.

Leave a Reply